ದರೋಡೆ ಕೊಲೆಗಾರನ ತನಿಖೆಯ ರೋನಿ --ರೇಟಿಂಗ್ : 3/5 ***
Posted date: 27 Fri, Oct 2023 03:55:48 PM

ಧರ್ಮಕೀರ್ತಿರಾಜ್ ಅಭಿನಯದ ರೋನಿ ಚಿತ್ರವು ಸೆಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ಹೊಂದಿದೆ. ಚಾಕಲೇಟ್ ಹುಡುಗನಾಗಿದ್ದ ಅವರು ಈ ಸಿನಿಮಾದ ಮುಖಾಂತರ ಆಕ್ಷನ್ ಹೀರೋ ಆಗಿದ್ದಾರೆ. 

ಶ್ರೀಮಂತ ಹುಡುಗಿ ಮನೆಯಲ್ಲಿರುವ ಮೂವತ್ತು ಕೋಟಿ ದರೋಡೆ ಆಗುತ್ತದೆ. ಇದರ ಮಧ್ಯೆ ಎರಡು ಕೊಲೆಗಳು ನಡೆಯುತ್ತದೆ. ಎರಡಕ್ಕೂ ಒಂದೇ ಸಾಮ್ಯತೆ ಇರುತ್ತದೆ. ಕೊಲೆ ಮಾಡಿದವರು ಯಾರು? ಇದಕ್ಕೆ ಸಂಬಂದವೇನು? ಈಕೆಗೆ ನ್ಯಾಯ ಸಿಗುತ್ತದಾ? ನಾಲ್ಕು ಪಾತ್ರಗಳು ಇರಲಿದ್ದು, ರೋನಿ ಯಾರು ಎನ್ನುವುದು ಕೊನೆಯಲ್ಲಿ ತಿಳಿಯುತ್ತದೆ. ವಿರಾಮದ ನಂತರ ಬರುವ ಸನ್ನಿವೇಶಗಳು ಒಂದಕ್ಕೊಂದು ಲಿಂಕ್ ಕೊಡುತ್ತಾ ಕ್ಲೈಮಾಕ್ಸ್‌ದಲ್ಲಿ ಎಲ್ಲದಕ್ಕೂ ಉತ್ತರ ಸಿಗುತ್ತದೆ. ಇದರ ಬಗ್ಗೆ ಹೆಚ್ಚು ತಿಳಿದುಕೊಳ್ಳುವುದಕ್ಕಿಂತ ಒಮ್ಮೆ ನೋಡಿ ಬರುವುದಾದರೆ ಯಾವ ಅಡ್ಡಿಯೂ ಇಲ್ಲ.

ರಚನೆ,ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಆರ್.ಕೆ.ಕಿರಣ್ ಸನ್ನಿವೇಶಕ್ಕೆ ತಕ್ಕಂತೆ ದ್ಯಶ್ಯಗಳನ್ನು ಪೋಣಿಸಿರುವುದು ಪರದೆ ಮೇಲೆ ಕಾಣಿಸಿತ್ತದೆ. ಇದರಿಂದ ಚಿತ್ರರಂಗಕ್ಕೆ ಮತ್ತೋಬ್ಬ ಪ್ರತಿಭೆ ಸಿಕ್ಕಂತೆ ಆಗಿದೆ.  

ನಾಯಕಿ ರುತ್ವಿಪಟೇಲ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇವರಿಬ್ಬರಿಗಿಂತ ಹೆಚ್ಚು ಗಮನ ಸೆಳೆದಿರುವುದು ಎರಡು ನಾಯಿಗಳು. ಮತ್ತೋಂದು ಪ್ರಮುಖ ಪಾತ್ರದಲ್ಲಿ ತಿಲಕ್ ಕಾಣಿಸಿಕೊಂಡಿದ್ದು, ಉಳಿದಂತೆ ವರ್ಧನ್‌ತೀರ್ಥಹಳ್ಳಿ, ರತನ್‌ಚೆಂಗಪ್ಪ, ಬಲರಾಜವಾಡಿ, ರಘುಪಾಂಡೇಶ್ವರ್, ಕೀರ್ತಿರಾಜ್ ತಮಗೆ ನೀಡಿದ ಕೆಲಸಕ್ಕೆ ನ್ಯಾಯ ಒದಗಿಸಿದ್ದಾರೆ. 

ಆಕಾಶ್‌ಪರ್ವ ಸಂಗೀತದಲ್ಲಿ ಎರಡು ಹಾಡುಗಳು ಕೇಳಬಲ್. ಛಾಯಾಗ್ರಾಹಕ ವೀನಸ್‌ನಾಗರಾಜಮೂರ್ತಿ, ಸಂಕಲನ ವೆಂಕಿ.ಯು.ಡಿ.ವಿ, ದೃಶ್ಯಗಳಿಗೆ ಅದ್ಬುತ ಕಲರ್ ನೀಡಿರುವ ಕಿಶೋರ್ ಇವರೆಲ್ಲರ ಶ್ರಮಕ್ಕೆ ಶಹಬ್ಬಾಸ್ ಹೇಳಲೇ ಬೇಕು. ಎಂ.ರಮೇಶ್ ಹಾಗೂ ಪವನ್‌ಕುಮಾರ್ ನಿರ್ಮಾಣ ಮಾಡಿದ್ದಾರೆ. 

 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed